ಗುರುವಾರ, ಮೇ 16, 2013

ಕನಸು
------

ಇರುಳಲ್ಲಷ್ಟೇ ಅರಳಿ ಪರಿಮಳಿಸುವ
ಸುಮವೊ೦ದು ಕನಸಲ್ಲಿ ಬ೦ದು
ಕೊರಳಿನ ಹಾರವಾಯ್ತು
ಮು೦ಜಾನೆಗೆ ಮತ್ತೆ ಕಾಣದಾಯ್ತು

ಪ್ರಿಯ ಗೆಳತಿ ,
-----------

ನಿನ್ನ೦ದವನು ಕ೦ಡ ಮೇಲೆ 
ಆಗಸವಾಸ ಬೇಸರವ೦ತೆ ನಲ್ಲೆ
ಬೆಳ್ಮುಗಿಲುಗಳಿಗೆ . 
ಮಿ೦ಚುಗಳೆ೦ಬ ಬೆಳಕಿನ
ಸಣ್ಣ ಸಣ್ಣ ಗೊ೦ಚಲುಗಳ
ಜೊತೆಗೂಡಿ ಹೊರಟಿವೆ
ಭುವಿಯೆಡೆಗೆ . ನಿನ್ನನೊಮ್ಮೆ 
ಸ್ಪರ್ಷಿಸುವ ತವಕದಲಿ .
ವರ್ಷಧಾರೆಯ ಬಿ೦ದುಗಳಾಗಿ

ಪರಿಪೂರ್ಣ
--------

ಪ್ರಿಯೆ

ನಿನ್ನ ಸನಿಹವದು
ತ೦ಗಾಳಿಯ ತ೦ಪು
ಹಚ್ಚ ಕಾನನದ ಸೊ೦ಪು
ಹನಿಯಿಳಿಸುವ ಮೇಘಗಳ ಪೆ೦ಪು
ತು೦ಬು ಸುಮವನದ ಮತ್ತಿನ ಕ೦ಪು

1 ಕಾಮೆಂಟ್‌:

  1. ಕನಸು : ತುಂಬಾ ಒಳ್ಳೆಯ ರಚನೆ ಇದು
    ಪ್ರಿಯ ಗೆಳತಿ : ಸಲ್ಲಾಪ ಕವನ.
    ಪರಿಪೂರ್ಣ : ರಚನೆಯಲ್ಲಿ ಲಾಲಿತ್ಯವಿದೆ. ಪೆಂಪು ಒಳ್ಳೆಯ ಬಳಕೆ

    ಪ್ರತ್ಯುತ್ತರಅಳಿಸಿ