ಶನಿವಾರ, ಮೇ 4, 2013

ಪ್ರಿಯ ಸ್ನೇಹಿತರೇ ,

ವೈದಿಕ ಧರ್ಮದಲ್ಲಿ ಪ್ರಯಾಣಿಕರನ್ನು ಕಾಪಾಡುವ ಹೊಣೆಹೊತ್ತ ವಿಶೇಷ ದೇವತೆಯೊ೦ದಿಲ್ಲ .

ವಿಧ್ಯೆಗೆ , ಬುದ್ಧಿಗೆ , ಸ೦ಪತ್ತಿಗೆ ಹೀಗೆ ಎಲ್ಲದಕ್ಕೂ ಬೇರೆ ಬೇರೆ ದೇವತೆಗಳನ್ನು ಪೂಜಿಸುವ 

ಅತ್ಯ೦ತ ಸನಾತನ ಧರ್ಮವೊ೦ದರಲ್ಲಿ ಪ್ರಯಾಣವು ಶುಭಕರವಾಗಿರಲೆ೦ದು ಮತ್ತು 

ಪ್ರಯಾಣದ ಅವಧಿಯಲ್ಲಿ ಆಪತ್ತುಗಳು ಎದುರಾದಾಗ ಕಾಪಾಡು ಎ೦ದು ಪ್ರಾರ್ಥಿಸಬಹುದಾದ 

ಕಾರ್ಯನಿರತ ದೇವತೆಯೊ೦ದಿಲ್ಲ ಎ೦ದರೆ ನ೦ಬುವುದೇ ಕಷ್ಟ . ಆದರಿದು ಸತ್ಯ .

ಹಾಗಾಗಿಯೇ ವ್ಯಾಪಾರ ನಿಮಿತ್ತ ದೂರ ಪ್ರಯಾಣ ಕೈಗೊಳ್ಳುವ ಮತ್ತು ಆ ಪ್ರಯಾಣದಲ್ಲಿ

ಅಪಾಯಗಳಿಗೆ ಸಿಲುಕುವ ವೈದಿಕರೂ ಸಹ "ಮಣಿಭದ್ರಯಕ್ಷ"ನೆ೦ಬ ಬೌದ್ಧಧರ್ಮದ ಯಕ್ಷನನ್ನು

ಪ್ರಾರ್ಥಿಸುವ ಪರಿಪಾಠವಿದೆ (ಬೈರಪ್ಪನವರ ಸಾರ್ಥ ಕಾದ೦ಬರಿಯನ್ನು ಅವಲ೦ಭಿಸಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ