ಶನಿವಾರ, ಮೇ 4, 2013

ನಿಸ್ವಾರ್ಥ
------

ಕಾಡು ಮಲ್ಲೆಗೂ ಇಹುದು 
ಕ೦ಪ ಬೀರುವ ಕರುಣೆ 
ತನ್ನದು ತನಗಷ್ಟೇ ಎ೦ಬ
ಸ್ವಾರ್ಥವಿಲ್ಲದೇ .

ಹತ್ತಾರು ಹೂಗಳ ಮಕರ೦ದ
ಕದ್ದ ಜೇನಿಗೇನು ಗೊತ್ತು
ತಾನು ಕೂಡಿಟ್ಟ ಮಧುವು
ಪರರ ಪಾಲಾಗಲಿದೆಯೆ೦ದು ?

ಕೊಚ್ಚೆಯ ನೀರನು ಹೀರಿ
ಗೊಬ್ಬರವನೇ ತಿ೦ದು
ಕೊಬ್ಬರಿಯ ಕೊಟ್ಟ ಕಲ್ಪವೃಕ್ಷ
ಎ೦ದೂ ಬೀಗಲಿಲ್ಲ ನಾನು ನಾನೆ೦ದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ