ಶನಿವಾರ, ಮೇ 4, 2013

ಸಾಹಿತ್ಯವೆ೦ಬುದು... 
---------------

ಪ್ರತಿಯೊ೦ದು ಸಾಹಿತ್ಯವೂ , 
ಸಾಹಿತಿಯ ಅನಿಯಮಿತ ಅವಧಿಯ
ಬಸುರಿನ ಕೂಸು .

ಹಣತೆ ಕಾರ್ಯ
----------

ತೈಲವನ್ನು ಹನಿ ಹನಿಯಾಗಿ ಹೀರಿ
ತನ್ನ ತನುವಿನಲಿ ಅಡಗಿರುವ
ಜಠರಾಗ್ನಿಯನ್ನು ಹೊರದೂಡುವ
ವ್ಯರ್ಥ ಪ್ರಯತ್ನ .

ಹಣತೆ
----

ತಾನು ಬೆಳಗಿದ೦ತೆ
ಎಣ್ಣೆ ಮತ್ತು ಬತ್ತಿಗಳನ್ನು ಅಗ್ನಿಗೆ
ಆಹುತಿ ಕೊಡುವ ಮಾಟಗಾತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ