ಗುರುವಾರ, ಮೇ 9, 2013


ಮಿಲನ
-----

ಬಾನು ಭೂಮಿಗೆ ಮದುವೆ
ಮೆರವಣಿಗೆ ಹೊರಟ ಮೇಘಗಳು
ಮಳೆಯ ರೂಪದಲ್ಲಿ
ಮಿ೦ಚುಗಳ ಹಾದಿಯಲ್ಲಿ
ಸಿಡಿಲು ಗುಡುಗಿನ ಮೇಳದಲ್ಲಿ

ಧೃತಿ
----

ಗಹಗಹಿಸಿ ನಗುತಿಹುದು ಕತ್ತಲೆ
ಬಿರುಗಾಳಿಯೂ ನುಗ್ಗುತಿದೆ ಒಮ್ಮೆಲೇ
ಭರಿಸಿದರೂ ಎಲ್ಲ ಕಷ್ಟ-ಕೋಟಲೆ
ಮ೦ದಸ್ಮಿತ ಹಣತೆಯ ಬೆಳಕಿನ ತಲೆ

ಒ೦ಟಿತನ
-------

ಬಾಳೊ೦ದು ಹಸಿರುಗಾಣದ ಬೀಳಾಗಿ
ಮುಗಿಲಿನೆಡೆ ನೋಡುತಿದೆ ಪ್ರೀತಿ ಮಳೆಗಾಗಿ
ಕೋಳ ಬಿಗಿದಿದೆ ಮನಕೆ ಒ೦ಟಿತನ
ನೀ ಬೆಳಕಾಗಿ ಬ೦ದು ಬಿಡಿಸೆನ್ನ ಬ೦ದನ

2 ಕಾಮೆಂಟ್‌ಗಳು:

  1. ಮಿಲನ : ಪ್ರಕೃತಿಯಾಟಕ್ಕೆ ನೀವು ಕೊಟ್ಟ ಶೀರ್ಷಿಕೆ ಅಮೋಘ.

    ಧೃತಿ: ಅರೆ ನಮ್ಮ ನಾದಿನಿಯ ಪಾಪುವಿನ ಬಗ್ಗೆ ನಿಮಗೆ ಹೇಗೆ ತಿಳಿಯುತು ಗೌಡರೇ, ಅವಳು ಅನುಭವಿಸಿದ ಆರೋಗ್ಯ ಸಮಸ್ಯೆಗಳು ಮತ್ತು ಅದನ್ನು ಆ ಪುಟ್ಟ ಕಂದ ಎದುರಿಸಿದ ರೀತಿ ನಿಮ್ಮ ಕವನದಲ್ಲಿದೆ. ಸಲಾಂ ನಿಮಗೆ. ಧೃತಿಯ ಫೋಟೋ ನನ್ನ ಬ್ಲಾಗಿನಲ್ಲಿದೆ.

    ಒಂಟಿತನ: 'ಹಸಿರುಗಾಣದ' ಒಳ್ಳೆಯ ಪದ ಸಂಸ್ಕಾರ! ಬರುತ್ತಾಳೆ ಆಕೆ ಒಂದು ಶೀನ ಬಿಡಿಸಲು ನಿಮ್ಮ ಒಂಟಿತನ ಮತ್ತು ತುಂಬಲು ಮನದ ಮನೆ.

    3ಕ್ಕೂ ಸೇರಿಸಿ 3 ಚೀಯರ್ಸ್!!!

    ಪ್ರತ್ಯುತ್ತರಅಳಿಸಿ
  2. ನಮ್ಮ೦ತ ಕಿರಿಯರನ್ನು ನೀವು ಹುರಿದು೦ಬಿಸುವ ರೀತಿಯೇ ಅಮೋಘ . ನಮ್ಮ ಬರವಣಿಗೆಗಳು ಪ್ರಬುದ್ಧವೋ ಅಪ್ರಬುದ್ಧವೋ !!? ಆದರೂ ಅವುಗಳಿಗೆ ನಿಮ್ಮನ್ನು ಒಳಪಡಿಸಿಕೊ೦ಡೇ ಓದುವ ಮತ್ತು ಮೆಚ್ಚಿ ಪ್ರತಿಕ್ರಿಯಿಸುವ ನಿಮ್ಮ
    ಮನೋವೈಶಾಲ್ಯ ನನ್ನನ್ನು ಸ೦ಕೋಚಿಸುವ೦ತೆ ಮಾಡಿದೆ .
    ಸರ್ , ನನ್ನ ಬರಹಗಳ ನ್ಯೂನತೆಗಳನ್ನೂ ದಯೆಮಾಡಿ ಸೂಚಿಸುವ ಮತ್ತು ತಿದ್ದುವ ಮಾಸ್ತರಿಕೆ ನಿಮ್ಮಿ೦ದಾಗಲೆ೦ಬುದೇ ನನ್ನಾಶಯ .
    ಧನ್ಯವಾದಗಳೊ೦ದಿಗೆ ........ ರಾಜ್ .

    ಪ್ರತ್ಯುತ್ತರಅಳಿಸಿ