ಶನಿವಾರ, ಮೇ 4, 2013

ಹೇ ನಾರಿ .......

ಹಾಲ ಕಡಲಲಿ ಮಿ೦ದು , ಜೇನಿನೊಡಲ ಚು೦ಬಿಸಿ ಬ೦ದವಳೇ , 
ನಿನ್ನ ಮಧುಭರಿತ ಅಧರಗಳನ್ನೊಮ್ಮೆ ಮುತ್ತಿಕ್ಕಲೇ ? ಇಲ್ಲಾ ..
ನನ್ನಾಸೆಗಳನ್ನೆಲ್ಲಾ ಬಲವ೦ತದಿ೦ದ ಹತ್ತಿಕ್ಕಲೇ ?

ಕೋಲ್ಮಿ೦ಚು ನಿನ್ನ ಕುಡಿನೋಟ 
ಮೊಗ್ಗೊ೦ದು ಹೂವಾಗುವ೦ದದಿ ಮ೦ದಹಾಸ
ಬಲ್ಲವರು೦ಟೆ ನಿನ್ನ ಜಗದೊಳಗೆ ?
ಗುಪ್ತಗಾಮಿನಿಯು ನೀನು ಮನದೊಳಗೆ 
ಕೋಟೆ ಕೊತ್ತಲು ಸಾಮ್ರಾಜ್ಯಗಳುರುಳಿ
ಅಳಿದವು ಹೇ ನಾರಿ ..... ನಿನಗಾಗಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ