ಸೋಮವಾರ, ಮೇ 6, 2013

ನೀರಸ
-----

ದು೦ಭಿಗಳು ತಾಕದೇ ಉಳಿಸಿದ ಹೂಗಳು
ಬಣ್ಣವಿಲ್ಲದ ಮಳೆಬಿಲ್ಲಿಗೆ ಸಮವ೦ತೆ ?


ನೆನಪು
-----

ಹೆಸರು ಮರೆಯಬಹುದು
ಮಾಸಬಹುದು ಮೈಬಣ್ಣ
ಸುಕ್ಕುವುದು ಚರ್ಮವಷ್ಟೇ
ನಿನ್ನ ನೆನಹುಗಳು ಮಾತ್ರವೇ
ನಿತ್ಯ ನಿರ೦ತರ ನನ್ನಾತ್ಮದಲಿ


ಹರಯ
-----

ಹರಯವೊ೦ದು ಆಸೆಯ ಗಾಳಿಪಟ
ಮನವೇ ಅದರ ಸೂತ್ರಧಾರ
ಭಾವನೆಗಳೇ ನೂಲಿನ೦ತೆ ಆಧಾರ
ಗೊತ್ತು-ಗುರಿಯಿಲ್ಲಾ , ದಿಕ್ಕು-ದೆಸೆಯಿಲ್ಲಾ
ಉನ್ಮಾದದಲಿ ಹಾರುತಿದೆ ಹುಚ್ಚು ಕುದುರೆಯ೦ತೆ
ಹಗಲುಗನಸುಗಳೇ ಅದರ ಬಾಲ೦ಗೋಚಿಯ೦ತೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ