ಮಂಗಳವಾರ, ಮೇ 7, 2013


ನಾವು ರೈತರು
-----------

ಜೀವನವೆಲ್ಲಾ ಕ೦ಬನಿ ಮಿಡಿದು
ಕುಡಿದು , ಬರಿದೇ ದುಡಿದು
ನಲಿವಿರದೇ ಬದುಕಿ , ನೋವನ್ನೇ
ಉ೦ಡು , ಬೆ೦ದವರು ನಾವು .

ಸೋತರೂ ಸೊರಗದೇ , ಸಾವಿಗೂ
ಮರುಗದೇ , ದೇಹವಿದು ಜೀವಿಸಿದೆ
ನಗುವನ್ನು ಮರೆತು , ಅಳುವಲ್ಲೇ
ಕಲೆತು , ಬದುಕಿಹೆವು ನಾವು .

ಬರವಿರಲಿ , ನೆರೆಯೇ ಬರಲಿ
ಮುಳುಗೇಳಲಿ ರಾಜ್ಯ , ಸಿ೦ಹಾಸನಗಳು
ಭೂಮಿಯೊಡಲ ಸೀಳಿ , ಎಲ್ಲರ
ಹಸಿವ ನೀಗಿ , ಹಸಿದವರು ನಾವು .

1 ಕಾಮೆಂಟ್‌:

  1. ರೈತಾಪಿ ಬದುಕನ್ನು ಮನ ಮಿಡಿಯುವಂತೆ ಕಟ್ಟಿಕೊಟ್ಟ ಕವನವಿದೆ. ಅವರ ಬವಣೆ ಮುಗಿಯದು ಯಾರೇ ಗದ್ದುಗೆ ಏರಿದರೂ ಅಲ್ಲವೇ ಗೆಳೆಯ?

    http://badari-poems.blogspot.in

    ಪ್ರತ್ಯುತ್ತರಅಳಿಸಿ