ಶನಿವಾರ, ಮೇ 4, 2013

ಆತ್ಮವಿಶ್ವಾಸ
---------

ಅಲ್ಲೊ೦ದು ಒಣ ಗರಿಕೆ
ಇಲ್ಲೊ೦ದು ಹಸೀ ನಾರು
ತ೦ದು ಹೆಣೆಯುತ್ತಿತ್ತು
ಬಸಿರು ಗುಬ್ಬಿ ತನಗೊ೦ದು ಗೂಡು

ವಿಶ್ರಾ೦ತಿಗೆ ಸಲಹೆಯಿತ್ತವರಿಲ್ಲ
ಅನುಕ೦ಪದ ಬೆ೦ಬಲಿಗರಿಲ್ಲ
ತೃಷೆ ತೀರಿದ ಮೇಲೆ
ಗ೦ಡು ಗುಬ್ಬಿಯೂ ಅದರತ್ತ ಸುಳಿಯಲಿಲ್ಲ

ಆದರೂ ಬದುಕುವ ಉತ್ಸಾಹಕೆ
ಇವಾವುಗಳ ಪರಿವೆ ಇಲ್ಲದೇ
ಕಟ್ಟಿತ್ತು ಗುಬ್ಬಿ ಆತ್ಮವಿಶ್ವಾಸದ ಗೂಡೊ೦ದ
ಸ್ವಾಭಿಮಾನದ ಮಹಲೊ೦ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ