ಶನಿವಾರ, ಮೇ 4, 2013

ಪ್ರಿಯ ಸ್ನೇಹಿತರೇ ,

ಈ ವಾರದ ಬಿಡುವಿನ ವೇಳೆಯಲ್ಲಿ ನಾನು 'ಕು೦ವೀ' ರವರ "ಚಾರ್ಲೀ ಚಾಪ್ಲಿನ್" ಪುಸ್ತಕವನ್ನು ಓದಿ ಮುಗಿಸಿದೆ .

ಚಲನಚಿತ್ರ ಕಲಾವಿದನೋರ್ವನ (ಅದರಲ್ಲೂ ಹಾಸ್ಯ ಕಲಾವಿದನ) ಶೈಶವಾವಸ್ಥೆಯಿ೦ದಲೇ ಪ್ರಾರ೦ಭಿಸಿ , ಆತನ ಬದುಕಿನ ಕೊನೆಯ ಕ್ಷಣದವರೆಗಿನ ಪ್ರತಿಯೊ೦ದು ವಿವರಗಳನ್ನು ಮನಃಮುಟ್ಟುವ೦ತೆ ಸಾದರಪಡಿಸಿದ್ದಾರೆ ಲೇಖಕರು .
ಬಡತನ , ಬಡಜನರೆಡೆಗೆ ಆಳುವವರಲ್ಲಿರುವ ಅಸಡ್ಡೆ ಮತ್ತು ತಿರಸ್ಕಾರಗಳು , ಮಾನವೀಯತೆಯನ್ನೇ ಅಣಕಮಾಡುವ೦ತಹ ಕಾನೂನು ಕಟ್ಟಳೆಗಳು , ಅನ್ಯದೇಶಗಳಲ್ಲಿ ಬದುಕನರಸಿ ಹೋಗುವವರ
ಬದುಕಿನ ಕಷ್ಟಗಳು , ವೈವಾಹಿಕ ಜೀವನದ ಬಗೆಗಿನ ಪಾಶ್ಚಿಮಾತ್ಯರಲ್ಲಿರುವ ನಿರ್ಭಾವುಕ ಮನಃಸ್ಥಿತಿಗಳು , ಕಲಾವಿದರ ಜೀವನದ ವಾಸ್ತವ ಸ೦ಘರ್ಷಗಳು ಮತ್ತು 'ಉರಿವ ಮನೆಯಲ್ಲಿ ಗಳ ಹಿರಿಯುವ' ರೀತಿಯ ರಾಜಕೀಯ
ಮತ್ತು ಮು೦ತಾದ ಬಹಳಷ್ಟು ವಿಷಯಗಳ ಕಡೆಗೆ ಬೆಳಕು ಚೆಲ್ಲುವ ಈ ಕೃತಿ ಮನೋಜ್ನವಾಗಿದೆ .
ಚಾಪ್ಲಿನ್ ಬಗೆಗೆ ಹೇಳುತ್ತಲೇ ಸಮಕಾಲೀನರಾದ ಇತರೇ ಕಲಾವಿದರು , ಖ್ಯಾತ ಲೇಖಕರು , ವಿಚಾರವಾದಿಗಳು ರಾಜಕೀಯ ಧುರೀಣರು , ಆ ಕಾಲದ ರ೦ಗಭೂಮಿ ಹಾಗೂ ಮೂಕಿ ಚಲನಚಿತ್ರಗಳ ಸ೦ಕ್ಷಿಪ್ತ ಕಥಾನಿರೂಪಣೆ ಮತ್ತು ಎರಡು ಮಹಾಯುದ್ದಗಳನ್ನೂ ಅನನ್ಯವಾಗಿ ಪ್ರಸ್ತುತಪಡಿಸಿರುವ ಕರ್ತೃವಿನ ಬಗೆಗೆ ಸಹಜವಾಗಿಯೇ ಮನಸ್ಸು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ . ಅದರಲ್ಲೂ ಹಿಟ್ಲರ್ , ನಾಝಿ ಮತ್ತು ಕಮ್ಯುನಿಷ್ಟರ
ರಾಜಕೀಯವನ್ನೂ ದೇಶಾ೦ತರ ಅಲೆಯುವ ಕಥಾವಸ್ತುವಿನ ಜೊತೆಗೆ ಆಯಾ ದೇಶಗಳ ಜನರ ಸ೦ಸ್ಕೃತಿ ಮತ್ತು
ಮನಃಸ್ಥಿತಿಗಳನ್ನೂ ಒಕ್ಕಣಿಸಿದ ಪರಿಯೂ ಅಭಿನ೦ದನಾರ್ಹ .
ಓದಿರುವವರು ಇನ್ನೊಮ್ಮೆ ಓದದವರು ಈಗಲೇ ಓದಬೇಕಾದ ಕೃತಿ . ಇದು ನನ್ನನಿಸಿಕೆ .

ಸು೦ದರ ಸಾಹಿತ್ಯದೆಡೆಗಿನ ಅಭಿಮಾನದಿ೦ದ ........ ರಾಜ್ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ