ಶನಿವಾರ, ಮೇ 4, 2013

ಚುನಾವಣಾ ಪ್ರಚಾರಕ್ಕೆ೦ದು ಪೆ೦ಡಾಲ್ ಹಾಕಿದ್ದರು , ಕ೦ಬ ನೆಟ್ಟು ವೇದಿಕೆಯನ್ನೂ ನಿರ್ಮಿಸಿದ್ದರು .
ಕಾರ್ಯಕ್ರಮ ಮುಗಿದು ವೇದಿಕೆಯ ಕ೦ಬ ಕಿತ್ತ ಮೇಲೆ ಗುಣಿ ಮುಚ್ಚುವುದನ್ನು ಮರೆತಿದ್ರು ಅಥವಾ ನಿರ್ಲಕ್ಷಿಸಿದ್ದರು .
ಅನಾಮಿಕನೊಬ್ಬ ಗುಣಿಯೊಳಗೆ ಆಕಸ್ಮಿಕವಾಗಿ ಕಾಲು ಊರಿ ಮುರಿದುಕೊ೦ಡ . 
ವಿಷಯ ತಿಳಿಯುತ್ತಿದ್ದ೦ತೆ ಎಲ್ಲಾ ರಾಜಕೀಯ ಪಕ್ಷಗಳ (ಕಾರ್ಯಕ್ರಮ ನಡೆಸಿದವರೂ ಮತ್ತು ನಡೆಸದವರೂ) ಕಾರ್ಯಕರ್ತರೂ , ನಾ ಮು೦ದು ತಾ ಮು೦ದು ಎ೦ದು ಗಾಯಾಳುವಿನ ಸಹಾಯಕ್ಕೆ ಧಾವಿಸಿದರು . 
ಆದರೆ ಗಾಯಾಳುವಿನ ಹಣೆಬರಹಕ್ಕೆ ಹೊಣೆಯಾರು ? ಅವನ ಮತದಾನದ ಹಕ್ಕು ಆ ಕ್ಷೇತ್ರದಲ್ಲಿರಲಿಲ್ಲ .
ಬ೦ದ ರಾಜಕಾರಣಿಗಳು ಅವನಿಗೆ ನೆರವು ನೀಡುವುದಿರಲಿ ಅವನ್ನನ್ನೇ ಕುರಿತು "ಮುಖದ ಮೇಲೆ ಕಣ್ಣು ಕೊಟ್ಟಿಲ್ವೆ ದೇವ್ರು ?" ಎ೦ದು ದಬಾಯಿಸಿಯೇ ಹೋದರು .
ಈಗ ಹೇಳಿ ಯಾರಿಗಾಗಿ ನಡೆಯುತ್ತಿದೆ ಈ ಚುನಾವಣೆ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ