ಶನಿವಾರ, ಮೇ 4, 2013

ಸಹಬಾಳ್ವೆ
--------

ಅರಳಿಯೊಳು ಬೇವೋ ?
ಬೇವಿನೊಳು ಅರಳಿಯೋ ?
ಎ೦ಬ೦ತೆ ಬಾಳುತಿವೆ
ಮರದೊಳಗೆ ಮರಹುಟ್ಟಿ
ಸಹಬಾಳುವೆಯ ಎದೆ ತಟ್ಟಿ .

ನಾಗರಕಟ್ಟೆಯ ಮರಗಳು .
ಜೋಡಿ ದೇಹದ , ಏಕ ಜೀವದ
ದ೦ಪತಿಗಳ೦ತೆ ಬೆಸೆದು
ಮನುಕುಲಕೆ ಸಾರುತಿವೆ
ಸೃಷ್ಠಿಯ ಸೂಕ್ಷ್ಮ ಸ೦ದೇಶ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ