ಅವಳು ಆಕರ್ಷಕವಾಗಿ ಕಾಣುತ್ತಿದ್ದಾಳೆ
ಏಕೆ೦ದರೆ, ಅವಳ೦ದಕೆ ಅವಳೇ ಕಾರಣ
ಕಣ್ಣಿಕೆ ಕಪ್ಪಿಟ್ಟು , ಕೆನ್ನೆಗೆ ಕೆ೦ಪಿಟ್ಟು
ನೊಸಲಿನಲಿ ಉದಯರವಿಯು
ಕೇಶರಾಶಿಯ ಹೆಣೆದ ನೀಳವೇಣಿ
ಹಿ೦ದಲೆಯಲಿ ಮಲ್ಲಿಗೆಯ ಮೊಳ
ಕಿವಿಗಳಲಿ ಉಯ್ಯಾಲೆ ಮುತ್ತಿನ ಜುಮುಕಿ
ಮೂಗಿನೆಸಳಿಗೆ ತೊಟ್ಟ ಕೆ೦ಗಲ್ಲ ನತ್ತು
ನುಲಿವ ಕೊರಳಿಗೆ ಹೊನ್ನ ಕಾಸಿನ ಸರ
ಜೊತೆಗೊ೦ದು ಅಮ್ಮನ ಪಚ್ಚೆಯ ಹಾರ
ಯೌವ್ವನದೆದೆಯ ಬಲವ೦ತದೆ ಬ೦ದಿಸಿಹ
ಮೃದು ರೇಶಿಮೆಯ ಕುಪ್ಪಸ . ನಾಜೂಕಿನ
ನೆರಿಗೆಗಳಲಿ ಉಟ್ಟಉದ್ದ ಸೆರಗಿನ ಸೀರೆ
ಅದನಿಡಿದಿಟ್ಟ ಸೊ೦ಟದ ಬೆಳ್ಳಿ ಡಾಬು
ಅ೦ಗೈಲಿ ಮಧರ೦ಗಿ, ಮು೦ಗೈಗೆ ಬಗೆ
ಬಗೆಯ ಗಾಜು ಬಳೆ, ರ೦ಗು ಪೂಸಿದ ಉಗುರು
ಹಿಮ್ಮಡಿಯ ದಾಟದ ಗೆಜ್ಜೆ ಕಾಲ್ಗಳಿಗೆ ,
ಮೊಲದ ಚರ್ಮದ ಮೃದು ಪಾದರಕ್ಷೆ
ಆದರೆ ಅವಳ೦ದಕೆ ಇವುಗಳ್ಯಾವೂ ಅಲ್ಲ
ಕಾರಣ .ಅವಳ೦ದಕೆ ಅವಳೇ ಕಾರಣ
ಏಕೆ೦ದರೆ, ಅವಳ೦ದಕೆ ಅವಳೇ ಕಾರಣ
ಕಣ್ಣಿಕೆ ಕಪ್ಪಿಟ್ಟು , ಕೆನ್ನೆಗೆ ಕೆ೦ಪಿಟ್ಟು
ನೊಸಲಿನಲಿ ಉದಯರವಿಯು
ಕೇಶರಾಶಿಯ ಹೆಣೆದ ನೀಳವೇಣಿ
ಹಿ೦ದಲೆಯಲಿ ಮಲ್ಲಿಗೆಯ ಮೊಳ
ಕಿವಿಗಳಲಿ ಉಯ್ಯಾಲೆ ಮುತ್ತಿನ ಜುಮುಕಿ
ಮೂಗಿನೆಸಳಿಗೆ ತೊಟ್ಟ ಕೆ೦ಗಲ್ಲ ನತ್ತು
ನುಲಿವ ಕೊರಳಿಗೆ ಹೊನ್ನ ಕಾಸಿನ ಸರ
ಜೊತೆಗೊ೦ದು ಅಮ್ಮನ ಪಚ್ಚೆಯ ಹಾರ
ಯೌವ್ವನದೆದೆಯ ಬಲವ೦ತದೆ ಬ೦ದಿಸಿಹ
ಮೃದು ರೇಶಿಮೆಯ ಕುಪ್ಪಸ . ನಾಜೂಕಿನ
ನೆರಿಗೆಗಳಲಿ ಉಟ್ಟಉದ್ದ ಸೆರಗಿನ ಸೀರೆ
ಅದನಿಡಿದಿಟ್ಟ ಸೊ೦ಟದ ಬೆಳ್ಳಿ ಡಾಬು
ಅ೦ಗೈಲಿ ಮಧರ೦ಗಿ, ಮು೦ಗೈಗೆ ಬಗೆ
ಬಗೆಯ ಗಾಜು ಬಳೆ, ರ೦ಗು ಪೂಸಿದ ಉಗುರು
ಹಿಮ್ಮಡಿಯ ದಾಟದ ಗೆಜ್ಜೆ ಕಾಲ್ಗಳಿಗೆ ,
ಮೊಲದ ಚರ್ಮದ ಮೃದು ಪಾದರಕ್ಷೆ
ಆದರೆ ಅವಳ೦ದಕೆ ಇವುಗಳ್ಯಾವೂ ಅಲ್ಲ
ಕಾರಣ .ಅವಳ೦ದಕೆ ಅವಳೇ ಕಾರಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ