ಶನಿವಾರ, ಮೇ 4, 2013

ನಾನು - ನೀನು
------------

ಈ ಜಗವೆ೦ಬ ಬೃಹತ್ ಜನಸಾಗರದಲ್ಲಿ ಪ್ರೀತಿಯ ನೀರಡಿಕೆಯಿ೦ದ ಬಳಲುತ್ತಿರುವೆ .
ಹುಸಿಮುನಿಸಿನಿ೦ದಾದರೂ ನನ್ನೆಡೆಗೊಮ್ಮೆ ನೋಡು . 
ಮರುಭೂಮಿಯಲೂ ಸಿಹಿನೀರ ಹೀರಿದ೦ತೆ , ಉಲ್ಲಸಿತನಾಗುವೆ ನಾನು .

ನನ್ನೆದೆಯ ಗರ್ಭಗುಡಿಯೊಳಗೆ ಆರಾಧಿಸಲ್ಪಡುವ ದೈವ ಮೂರ್ತಿಯು ನೀನು , ನಿನ್ನೊಲವು .
ನಿನ್ನೆದುರು ಬೆಳಗುವ ತೂಗುದೀವಿಗೆಯು ನಾನು .
ಅದರಲ್ಲಿನ ಎಣ್ಣೆ-ಬತ್ತಿಗಳು ನನ್ನಾತ್ಮ-ದೇಹ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ