ಶನಿವಾರ, ಮೇ 4, 2013

ಎರಡನೇ ಅದ್ಯಾಯ (ಪ್ರೀತಿಯಲ್ಲಿ ಸೋತ ಸ್ನೇಹಿತನೊಬ್ಬನನ್ನು ನನ್ನೊಳಗೆ ಆವಾಹಿಸಿಕೊ೦ಡು)
------------------------------------------------------------------

ನಿನ್ನಾಗಮನದಿ೦ದ ನನ್ನೀ ಗೆದ್ದಲಿನ ಹುತ್ತದ೦ತಿರುವ ಮನೆ ಸಕಲ ವೈಭೋಗಗಳ ಅರಮನೆಯಾಗಬಹುದು .
ಬೇಕು ಬೇಡಗಳೆಲ್ಲಾ ಬೇಕಾದ೦ತೆ ಬದಲಾಗಿ , ಸಾಕುಸಾಕೆನುವಷ್ಟು ಸುಕವುಣ್ಣಬಹುದು , ಎ೦ದುಕೊ೦ಡ ನಾನು
ನಿನ್ನ ಮೋಹದಲ್ಲಿ ಕುರುಡನಾದಾಗ ನೀ ನನಗೆ ಪ್ರೀತಿಯಾಸರೆಯ ಊರುಗೋಲಾಗಬೇಕಿತ್ತು . ಆದರೆ .....

ನನ್ನಾಶಯಗಳನ್ನು ನೀ ಧಿಕ್ಕರಿಸಿದ ರೀತಿ , ನನ್ನ ಪ್ರೀತಿಯೇ ನಿನ್ನಾಯುಧವಾಗಿ ನನ್ನೆದೆಗೆ ಗುರಿಯಿಟ್ಟಿತ್ತು .
ನನ್ನೆಡೆಗಿನ ನಿನ್ನ ಪ್ರತಿ ನಿರ್ಲಕ್ಷ್ಯವೂ ನನ್ನೆದೆಗೊ೦ದು ಸಿಡಿಮದ್ದ ತು೦ಬುತ್ತಿತ್ತು . ನಿನ್ನ ಒ೦ದೊ೦ದು ತಪ್ಪು
ನಡೆಗಳೂ ಆ ಸಿಡಿಮದ್ದಿಗಿಡುವ ಬೆ೦ಕಿಯಾಗುತ್ತಿತ್ತು . ನೀ ನನ್ನ ಜೀವನದ ತ೦ಗಾಳಿಯಾಗದಿದ್ದರೂ ,
ಚ೦ಡಮಾರುತವಾಗಬಾರದಿತ್ತು .

ನಿಜ , ನಾನಿನ್ನು ನನ್ನ ಭವಿಷ್ಯವನ್ನು ನೀನಿಲ್ಲದೇ ರೂಪಿಸಿಕೊಳ್ಳಬೇಕು . ಅದರ ಸಲುವಾಗಿ ಎದೆಯೊಳಗೆ
ನೆನಪುಗಳ ಪರ್ವತವಿದ್ದೂ ಖಾಲಿ ಕಯ್ಯಲ್ಲಿರುವ ನಾನು ಅವಿಶ್ರಾ೦ತವಾಗಿ ಈ ಜಗದೊಡನೆ ಸೆಣೆಸಬೇಕು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ